ಇಂದು ನವೆಂಬರ್ 1, ಕನ್ನಡ ರಾಜ್ಯೋತ್ಸವ ! ಎಲ್ಲೆಲ್ಲೂ ಕನ್ನಡದ ಕಲರವ, ಕನ್ನಡ ಹಬ್ಬದ ಸಂಭ್ರಮ. ಅಬ್ಬಾ! ಕನ್ನಡ ಹಾಗೂ ಕರ್ನಾಟಕ ಎಂಬ ಶಬ್ದ ಕಿವಿಗೆ ಬಿದ್ದ ಕೊಡಲೆ ಅದೆನೋ ರೋಮಾಂಚನ ಅದೆನೋ ಆನಂದ. ಕನ್ನಡದ ಹಿರಿಮೆ, ಗರಿಮೆಯನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ, ಅಷ್ಟು ಅಧ್ಬುತ ನಮ್ಮ ಕನ್ನಡ. ನಮ್ಮ ನಾಡು ಅನೇಕ ಸಸ್ಯ ಸಂಪತ್ತು , ಪ್ರಾಣಿ ಸಂಪತ್ತುಗಳಿಂದ ಕೂಡಿದ ಸಂಪದ್ಭರಿತ ನಾಡು. ಕನ್ನಡದ ಹಿರಿಮೆಯನ್ನು , ಎತ್ತರವನ್ನು , ಸಾಂಕೇತಿಕವಾಗಿ ಹೇಳುವ , ಮುಗಿಲು ಮುಟ್ಟವ ಗಿರಿ ಶಿಖರಗಳಿಂದ ಕೂಡಿದ ನಾಡು.ತನ್ನ ಸುಂದರವಾದ ಹರಿಯುವ ಶಬ್ದದ ಮೂಲಕ, ಕನ್ನಡ ಭಾಷೆಯ ಇಂಪನ್ನು ತಿಳಿಸುವ ನದಿಗಳ ಹಾಗೂ ಭೋರ್ಗರೆಯುವ ರಮಣೀಯ ಜಲಪಾತಗಳ ದಿವ್ಯ ನಾಡು ನಮ್ಮ ಕನ್ನಡ ನಾಡು.ಒಟ್ಟಿನಲ್ಲಿ ನಮ್ಮ ಹೆಮ್ಮೆಯ ಕನ್ನಡ ನಾಡು,ನಿಸರ್ಗ ಸಂಪತ್ತಿಯಿಂದ ಕೂಡಿದ ಸುಂದರ ನಾಡು.
ಕಲೆ , ಸಾಹಿತ್ಯ , ಸಂಗೀತ , ನೃತ್ಯ , ವಿಜ್ಞಾನ, ತಂತ್ರಜ್ಞಾನಗಳ ನಿಧಿ ನಮ್ಮ ಹೆಮ್ಮೆಯ ಕನ್ನಡ ನಾಡು.ಈ ಎಲ್ಲ ಕ್ಷೇತ್ರಗಳಿಗೂ ಕರ್ನಾಟಕದ ಕೊಡುಗೆ ಅಪಾರ ಹಾಗೂ ಅದ್ಭುತ.
ಹೀಗೆ ಹೇಳುತ್ತಾ ಹೋದರೆ ಅದಕ್ಕೆ ಕೂನೆಯೆ ಇಲ್ಲ.ಕನ್ನಡದ ಹಿರಿಮೆಯನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ.ಇಂತಹ ಅದ್ಭುತ ಕನ್ನಡ ನಾಡಿನಲ್ಲಿ ಜನಿಸಿದ ನಾವೇ ಧನ್ಯರು !
ಕನ್ನಡ ಭಾಷೆ ಅನೇಕ ಸಾಹಿತ್ಯ ರತ್ನಗಳಿಂದ ಶೋಭಿತವಾದ ಸಿರಿವಂತ ಭಾಷೆ.ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸ ಇರುವ ಸುಂದರ ಭಾಷೆ.
ಇಂತಹ ನಮ್ಮ ಹೆಮ್ಮೆಯ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮಲ್ಲರದ್ದು, ವಿಶೇಷವಾಗಿ ಇಂದಿನ ಯುವ ಪೀಳಿಗೆ, ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸಬೇಕು, ಹೆಚ್ಚು ಕನ್ನಡ ಸಾಹಿತ್ಯವನ್ನು ಓದಬೇಕು.ಹೀಗೆ ಕನ್ನಡ ಸಾಹಿತ್ಯ ಯುವ ಪೀಳಿಗೆಯಿಂದ ಪ್ರಸಾರವಾಗಿ, ಎಲ್ಲ ಕಡೆಯೂ ಕನ್ನಡದ ಇಂಪು ಹರಡಲಿ ಎಂದು ಆಶಿಸುತ್ತಾ.
ಸಮಸ್ತ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು.
Comments
Post a Comment